Kannada Reality Shows

ಇಬ್ಬರು ಔಟ್; ಒಬ್ಬರು ಸೆಲೆಕ್ಟ್: ಯಾರಿಗೆ ಸಿಗಲಿದೆ ಟಿಕೆಟ್ ಟು ಫಿನಾಲೆ

ಈ ವಾರ ಪೂರ್ತಿ ಟಿಕೆಟ್ ಟು ಫಿನಾಲೆ ಟಾಸ್ಕ್ ಗಳ ಮೂಲಕ ಒಬ್ಬರನ್ನು ಬಿಗ್ ಬಾಸ್ ನೇರವಾಗಿ ಫೈನಲ್ ಗೆ ಆಯ್ಕೆ ಮಾಡಿಕೊಳ್ಳಲಿದೆ.

ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ಅಂತಿಮ ಘಟಕ್ಕೆ ಬಂದು ತಲುಪಿದೆ. ಫಿನಾಲೆಗೆ ಇನ್ನು ದಿನಗಳು ಮಾತ್ರ ಉಳಿದಿರುವಾಗ ಸ್ಪರ್ಧಿಗಳ ನಡುವಣ ಪೈಪೋಟಿ ಕೂಡ ಜೋರಾಗಿದೆ.
ಈ ವಾರ ಪೂರ್ತಿ ಟಿಕೆಟ್ ಟು ಫಿನಾಲೆ ಟಾಸ್ಕ್​ಗಳ ಮೂಲಕ ಒಬ್ಬರನ್ನು ಬಿಗ್ ಬಾಸ್ ನೇರವಾಗಿ ಫೈನಲ್​ಗೆ ಆಯ್ಕೆ ಮಾಡಿಕೊಳ್ಳಲಿದೆ.
ಈ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಸವಾಲುಗಳನ್ನು ಪೂರೈಸಿ ಅತೀ ಹೆಚ್ಚು ಅಂಕಗಳಿಸುವ ಸ್ಪರ್ಧಿಯು ಇಮ್ಯುನಿಟಿಯೊಂದಿಗೆ ಅಂತಿಮ ವಾರದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.
ಏಳು ಮಂದಿ ಸದಸ್ಯರಲ್ಲಿ ಫೈನಲ್​ಗೆ ಪ್ರವೇಶಿಸಿದರೆ ಮನೆಯ ಇಬ್ಬರು ಸದಸ್ಯರು ಈ ವಾರ ಬಿಗ್ ಬಾಸ್​ನಿಂದ ಹೊರಬೀಳಲಿದ್ದಾರೆ.
ಅಂತಿಮ ಹಣಾಹಣಿಗೆ 5 ಮಂದಿ ಸ್ಪರ್ಧಿಗಳ ನಡುವೆ ನಡೆಯಲಿದ್ದು, ಹೀಗಾಗಿ ಈ ವಾರಾಂತ್ಯದ ಎಲಿಮಿನೇಷನ್ ಸ್ಪರ್ಧಿಗಳಿಗೆ ನಿರ್ಣಾಯಕ.
ಫೈನಲ್​ಗೇರಲು ಸ್ಪರ್ಧಿಗಳ ನಡುವಣ ಸ್ಪರ್ಧೆ ಕೂಡ ತೀವ್ರ ಪೈಪೋಟಿಯಿಂದ ಕೂಡಿದ್ದು, ಈಗಾಗಲೇ ಎರಡು ಟಾಸ್ಕ್​ಗಳಲ್ಲಿ ದೀಪಿಕಾ ಹಾಗೂ ವಾಸುಕಿ ಪದಕಗಳನ್ನು ಗೆದ್ದಿದ್ದಾರೆ.
ಇನ್ನುಳಿದ ದಿನಗಳಲ್ಲಿ ಯಾರು ಅತ್ಯುತ್ತಮವಾಗಿ ಆಡಿ ಪದಕ ಗೆಲ್ಲುತ್ತಾರೋ ಅವರೇ ನೇರವಾಗಿ ಫಿನಾಲೆ ತಲುಪಲಿದ್ದಾರೆ. ಆದರೆ ಟಿಕೆಟ್​ ಟು ಫಿನಾಲೆ ಟಾಸ್ಕ್​ಗಳು ಕಠಿಣವಾಗಿರುವುದರಿಂದ ಇಲ್ಲಿ ಬಲಿಷ್ಠ ಸ್ಪರ್ಧಿಗಳ ಲೆಕ್ಕಚಾರಗಳು ತಲೆ ಕೆಳಗಾಗುತ್ತಿದೆ.
ಮನೆಯಲ್ಲಿನ ನೂರು ದಿನಗಳಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಶೈನ್ ಶೆಟ್ಟಿ ಮತ್ತು ಕುರಿ ಪ್ರತಾಪ್ ಮೊದಲ ಟಾಸ್ಕ್​ನಲ್ಲಿ ಎಡವಿದ್ದರು.
ಹಾಗೆಯೇ ಅಂತಿಮ ಘಟ್ಟ ಬರುತ್ತಿದ್ದಂತೆ ದೀಪಿಕಾ ದಾಸ್ ಮತ್ತಷ್ಟು ಶಕ್ತಿಯೊಂದಿಗೆ ಟಾಸ್ಕ್​ಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಇದರ ನಡುವೆ ಟಾಸ್ಕ್​ ವೇಳೆ ಪ್ರಿಯಾಂಕಾ ಗಾಯಗೊಂಡಿದ್ದು, ಇದರಿಂದ ಅವರಿಗೆ ಮುಂದಿನ ಸವಾಲುಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ.
ಹಾಗೆಯೇ ವಾಸುಕಿ ವೈಭವ್ ಶಕ್ತಿಯೊಂದಿಗೆ ಯುಕ್ತಿಯನ್ನು ಬಳಸಿ ಫಿನಾಲೆಯ ದಾರಿ ನೋಡುತ್ತಿದ್ದರೆ, ಹರೀಶ್, ಭೂಮಿ ಶೆಟ್ಟಿ ಕೂಡ ಎಲಿಮಿನೇಷನ್​ನಿಂದ ಪಾರಾಗುವ ಹಾದಿ ಹುಡುಕುತ್ತಿದ್ದಾರೆ. 
ಪ್ರಸ್ತುತ ಬಿಗ್​ ಬಾಸ್ ಸ್ಪರ್ಧಿಗಳ​ ಆನ್​ಲೈನ್ ವೋಟಿಂಗ್ ಗಮನಿಸದರೆ…
ಅತ್ಯಂತ ಜನಪ್ರಿಯ ಹಾಗೂ ಪ್ರಬಲ ಸ್ಪರ್ಧಿಗಳ ಪಟ್ಟಿಯಲ್ಲಿ ದೀಪಿಕಾ ದಾಸ್ ಅಗ್ರಸ್ಥಾನದಲ್ಲಿದ್ದಾರೆ.
ಜನಪ್ರಿಯತೆ ವಿಷಯದಲ್ಲಿ ಮುಂಚೂಣಿಯಲ್ಲಿದ್ದರೂ, ಟಾಸ್ಕ್​ ವಿಚಾರದಲ್ಲಿ ಎಡವಿದ ಶೈನ್ ಶೆಟ್ಟಿಈ ವಾರದಲ್ಲಿ  2ನೇ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.
ಮೂರನೇ ಸ್ಥಾನವನ್ನು ಭೂಮಿ ಶೆಟ್ಟಿ ಅಲಂಕರಿಸಿಕೊಂಡಿದ್ದು, ಫಿನಾಲೆಗೇರುವ ಸ್ಪರ್ಧಿಗಳಲ್ಲಿ ಗುರುತಿಸಿಕೊಂಡಿದ್ದಾರೆ.
4ನೇ ಸ್ಥಾನವನ್ನು ವಾಸುಕಿ ವೈಭವ್ ಪಡೆದುಕೊಂಡಿದ್ದು, ಇವರು ಕೂಡ ಫೈನಲಿಸ್ಟ್​ನಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ.
ಹಾಗೆಯೇ ಕುರಿ ಪ್ರತಾಪ್ ಅವರಿಗೆ ಈ ಬಾರಿಯ ಆನ್​ಲೈನ್​ ವೋಟ್ಸ್ ಕಡಿಮೆ ಬಿದ್ದಿದ್ದು, ಡೇಂಜರ್​ ಝೋನ್​ನಲ್ಲಿದ್ದಾರೆ.
ಅದೇ ರೀತಿ ಪ್ರಿಯಾಂಕಾ ಕೂಡ ಡೇಂಜರ್ ಝೋನ್​ನಲ್ಲಿದ್ದು, ಜನಪ್ರಿಯತೆ ವಿಷಯದಲ್ಲಿ ಹಿಂದೆ ಬಿದ್ದಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಹರೀಶ್ ರಾಜ್ ಕೊನೆಯ ಸ್ಥಾನವನ್ನು ಪಡೆದುಕೊಂಡಿದ್ದು, ಡೇಂಜರ್​ ಝೋನ್​ನಲ್ಲಿದ್ದಾರೆ.
ಹೀಗಾಗಿ ಈ ವಾರದ ಎಲಿಮಿನೇಷನ್​ನಲ್ಲಿ ಹರೀಶ್ ರಾಜ್/ ಪ್ರಿಯಾಂಕಾ ಹೊರಬೀಳುವ ಸಾಧ್ಯತೆಯಿದೆ ಎನ್ನಬಹುದು.
ಹಾಗೆಯೇ ಟಿಕೆಟ್​ ಟು ಫಿನಾಲೆಯಲ್ಲಿ ದೀಪಿಕಾ, ಶೈನ್ ಶೆಟ್ಟಿ ಮತ್ತು ವಾಸುಕಿ ನಡುವೆ ನೇರ ಸ್ಪರ್ಧೆ ನಡೆಯಲಿದೆ.
ನಿಮ್ಮ ಪ್ರಕಾರ ಬಿಗ್ ಬಾಸ್ ಸೀಸನ್​ 7ನಲ್ಲಿ ನೇರವಾಗಿ ಫಿನಾಲೆಗೆ ತಲುಪುವ ಮೊದಲ ಸ್ಪರ್ಧಿ ಯಾರು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.

Trending

To Top