Film News

ಇತಿಹಾಸ ಸೃಷ್ಟಿಸಿದ ಗಲ್ಲಿ ಬಾಯ್!

ಝೋಯಾ ಅಖ್ತರ್ ನಿರ್ದೇಶನದ ‘ಗಲ್ಲಿ ಬಾಯ್’ ಚಿತ್ರವು ನಾಮನಿರ್ದೇಶನಗೊಂಡಿದ್ದ ಎಲ್ಲ 13 ವಿಭಾಗಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದೆ. 11 ಪ್ರಶಸ್ತಿ ಗಳಿಸಿದ್ದ ‘ಬ್ಲಾಕ್’ ಈವರೆಗೆ ಅತಿಹೆಚ್ಚು ಪ್ರಶಸ್ತಿ ಗೆದ್ದ ಕೀರ್ತಿಗೆ ಭಾಜನವಾಗಿತ್ತು. ಗುವಾಹತಿಯಲ್ಲಿ ಶನಿವಾರ ರಾತ್ರಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ‘ಗಲ್ಲಿ ಬಾಯ್’ ಮುಡಿಗೇರಿತು. ಝೋಯಾ ಅಖ್ತರ್‌ಗೆ ಅತ್ಯುತ್ತಮ ನಿರ್ದೇಶಕಿ, ರಣವೀರ್ ಸಿಂಗ್ ಮತ್ತು ಆಲಿಯಾ ಭಟ್‌ ಅವರಿಗೆ ಕ್ರಮವಾಗಿ ಅತ್ಯುತ್ತಮ ನಟ–ನಟಿ ಪುರಸ್ಕಾರ ಸಂದಿತು. ಅದೇ ಚಿತ್ರದಲ್ಲಿ ಎಂಸಿ ಶೇರ್ ಪಾತ್ರ ನಿರ್ವಹಿಸಿದ್ದ ಸಿದ್ಧಾಂತ್ ಚತುರ್ವೇದಿ ಅತ್ಯುತ್ತಮ ಪೋಷಕ ನಟ ಮತ್ತು ಅದೇ ಚಿತ್ರದಲ್ಲಿ ಮುರಾದ್‌ನ (ರಣವೀರ್‌) ತಾಯಿ ರಾಜಿಯಾ ಪಾತ್ರ ನಿರ್ವಹಿಸಿದ್ದ ಅಮೃತಾ ಸುಭಾಷ್ ಅತ್ಯುತ್ತಮ ಪೋಷಕ ನಟಿ ಗೌರವಕ್ಕೆ ಪಾತ್ರರಾದರು

ಪ್ರಶಸ್ತಿ ಪಟ್ಟಿ ಇಲ್ಲಿದೆ

ಅತ್ಯುತ್ತಮ ಚಿತ್ರ– ಗಲ್ಲಿಬಾಯ್, ಅತ್ಯುತ್ತಮ ನಿರ್ದೇಶಕಿ– ಝೋಯಾ ಅಖ್ತರ್ (ಗಲ್ಲಿಬಾಯ್), ಅತ್ಯುತ್ತಮ ಚಿತ್ರ (ವಿಮರ್ಶಕರ ಆಯ್ಕೆ)– ಆರ್ಟಿಕಲ್ 15 (ಅನುಭವ್ ಸಿನ್ಹಾ) ಮತ್ತು ಸೊಂಚಿರಿಯಾ (ಅಭಿಷೇಕ್ ಚುಬೆ).

ಅತ್ಯುತ್ತಮ ನಾಯಕ ನಟ– ರಣವೀರ್ ಸಿಂಗ್ (ಗಲ್ಲಿ ಬಾಯ್), ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ)– ಅಯುಷ್ಮಾನ್ ಖುರಾನಾ, ಅತ್ಯುತ್ತಮ ನಾಯಕ ನಟಿ– ಆಲಿಯಾ ಭಟ್ (ಗಲ್ಲಿ ಬಾಯ್), ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ)– ಭೂಮಿ ಪೆಡ್ನೇಕರ್ ಮತ್ತು ತಾಪ್ಸೀ ಪನ್ನು (ಸಾಂಡ್ ಕಿ ಆಂಖ್).

ಅತ್ಯುತ್ತಮ ಪೋಷಕ ನಟಿ– ಅಮೃತಾ ಸುಭಾಷ್ (ಗಲ್ಲಿ ಬಾಯ್), ಅತ್ಯುತ್ತಮ ಪೋಷಕ ನಟ– ಸಿದ್ಧಾಂತ್ ಚತುರ್ವೇದಿ (ಗಲ್ಲಿ ಬಾಯ್), ಬೆಸ್ಟ್ ಮ್ಯೂಸಿಕ್ ಆಲ್ಬಂ– ಗಲ್ಲಿ ಬಾಯ್ (ಝೋಯಾ ಆಖ್ತರ್ ಮತ್ತು ಅಕುರ್ ತಿವಾರಿ), ಕಬೀರ್ ಸಿಂಗ್ (ಮಿಥುನ್, ಅಮಲ್ ಮಲ್ಲಿಕ್, ವಿಶಾಲ್ ಮಿಶ್ರಾ, ಸಾಚೆತ್ ಪರಂಪರಾ ಮತ್ತು ಅಖಿಲ್ ಸಚ್‌ದೇವ್).

Trending

To Top