Film News

ಇಡೀ ಸ್ಯಾಂಡಲ್ ವುಡ್ ಮೆಚ್ಚುವಂಥ ಕೆಲಸಕ್ಕೆ ಮುಂದಾಗಿದ್ದಾರೆ ಪವರ್ ಸ್ಟಾರ್ ಮಗಳು ಧೃತಿ!

ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಪವರ್ ಸ್ಟಾರ್. ಕೇವಲ ಚಿತ್ರಗಳಲ್ಲಿ ಅಭಿನಯಿಸುವುದು ಮಾತ್ರವಲ್ಲದೆ ಸಮಾಜ ಸೇವೆಯಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ನಿಮಗೆಲ್ಲರಿಗೂ ಸಹ ತಿಳಿದಿರುವ ವಿಷಯವೇ.ಇನ್ನು ಈ ಹಿಂದೆ ಅಣ್ಣಾವ್ರು ಸಹ ನೇತ್ರದಾನ ಮಹಾದಾನ ಎಂದು ತಮ್ಮ ನೇತ್ರವನ್ನು ದಾನ ಮಾಡಿದ್ದರು. ಅಣ್ಣಾವ್ರು ಕೈಗೊಂಡ ಈ ಒಂದು ನಿರ್ಧಾರದಿಂದ ಹಲವಾರು ಮಂದಿ ತಮ್ಮ ನೇತ್ರವನ್ನು ದಾನ ಮಾಡಿ ಇತರರಿಗೆ ನೆರವಾಗಿದ್ದಾರೆ.ಇನ್ನು ಇದೀಗ ಪುನೀತ್ ಅವರ ಪುತ್ರಿ ಧೃತಿ ಅವರು ಸಹ ಇದೇ ಹಾದಿಯಲ್ಲಿ ಸಾಗಲು ಮುಂದಾಗಿದ್ದಾರೆ. ಅಂದಹಾಗೆ ಧೃತಿ ಅವರು ಅಪ್ಪನ ರೀತಿ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಹಾಗೂ ಅಮ್ಮನ ರೀತಿ ಪ್ರೊಡಕ್ಷನ್ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ ಬದಲಾಗಿ ತಮ್ಮದೇ ಆದ ವಿಭಿನ್ನ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಹೌದು ಧೃತಿ ಅವರು ತಮ್ಮ ತಾತ ಹೇಳಿದಂತೆ ನೇತ್ರದಾನ ಮಹಾದಾನ ಎಂಬುದನ್ನು ಪಾಲಿಸಲು ಮುಂದಾಗಿದ್ದು ಅಭಿಯಾನವೊಂದನ್ನು ಶುರು ಮಾಡಿದ್ದಾರೆ. ಈ ಅಭಿಯಾನದ ಮುಖಾಂತರ ಹಣವನ್ನು ಸಂಗ್ರಹಿಸಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ವಯಸ್ಸಾದವರಿಗೆ ಸಹಾಯ ಮಾಡಲು ಧೃತಿ ಅವರು ತಯಾರಾಗಿದ್ದಾರೆ. ಯಾರು ಬೇಕಾದರೂ ಸಹ ಈ ಅಭಿಯಾನದಡಿ ಧನ ಸಹಾಯವನ್ನು ಮಾಡಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರ ಸಹಾಯಕ್ಕೆ ನೆರವಾಗಬಹುದು.

ಇನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಂತಹ ದೊಡ್ಡ ಕಾರ್ಯ ಮಾಡಲು ಮುಂದಾಗಿರುವ ಪುನೀತ್ ಅವರ ಪುತ್ರಿ ಧೃತಿ ಅವರಿಗೆ ಮೆಚ್ಚುಗೆಯ ಸುರಿಮಳೆ ಬಂದಿದೆ. ಇನ್ನು ಧೃತಿ ಅವರ ಈ ಒಂದು ಒಳ್ಳೆಯ ನಿರ್ಧಾರ ನೋಡಿ ಎಲ್ಲರೂ ಹೇಳುತ್ತಿರುವ ಮಾತು ಒಂದೇ “ಹೇಳಿ ಕೇಳಿ ಯಾವ ವಂಶದ ಮಗಳು ಹೇಳಿ”.

Trending

To Top