Film News

ಇಂದು ಒಂದು ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಮೆಗಾಸ್ಟಾರ್ ಚಿರಂಜೀವ ಅವರ ಮೊದಲ ಸಂಭಾವನೆ ಎಷ್ಟು ಗೊತ್ತಾ?

ಇಂದು ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ಮೆಗಾಸ್ಟಾರ್ ಚಿರಂಜೀವಿ ಅವರ ಮೊದಲ ಸಂಭಾವನೆ ಎಷ್ಟಿದ್ದಿರಬಹುದು…?

ಚಿರಂಜೀವಿ ಅವರು ಇಂದು ಸಿನಿಮಾದಲ್ಲಿ ನಟಿಸುತ್ತಾರೆ ಅಂದರೆ ಅವರಿಗೆ 50 ಕೋಟಿ ಸಂಭಾವನೆ ನೀಡಲು ತಯಾರಾಗಿರುತ್ತಾರೆ ನಿರ್ಮಾಪಕರು. ಇಂತಹ ನಟನಿಗೆ ಮೊದಲೆರಡು ಸಿನಿಮಾಗಳಿಗೆ ಸಂಭಾವನೆಯೇ ಕೊಟ್ಟಿರಲಿಲ್ಲವಂತೆ.

ಪುನಾದಿ ರಾಳ್ಲು ಸಿನಿಮಾ ಚಿರು ನಟಿಸಿದ್ದ ಮೊದಲ ಚಿತ್ರವಾಗಿತ್ತು. ಆದರೆ ಮೊದಲು ರಿಲೀಸ್ ಆಗಿದ್ದು ಪ್ರಾಣಂ ಖರೀದು ಸಿನಿಮಾ.ಚಿರಂಜೀವಿ ಸಿನಿಮಾ ರಂಗಕ್ಕೆ ಬಂದಾಗ ಅವಕಾಶಕ್ಕಾಗಿ ಕಾಯುತ್ತಿದ್ದರೇ ಹೊರತು ಹಣಕ್ಕಾಗಿ ಅಲ್ಲ. ಇದೇ ಕಾರಣದಿಂದಲೇ ಚಿರು ನಟಿಸಿದ ಮೊದಲೆರಡು ಸಿನಿಮಾಗಳಿಗೆ ಹಣ ಕೊಡದಿದ್ದರೂ ಕೆಲಸ ಮಾಡಿದ್ದರು.

ನಂತರ ಮಾಡಿದ ಮೂರನೇ ಸಿನಿಮಾ ಮನವೂರಿ ಪಾಂಡವುಲು ಚಿತ್ರಕ್ಕೆ 1,116 ರೂಪಾಯಿ ಸಂಭಾವನೆ ಸಿಕ್ಕಿತಂತೆ ಚಿರಂಜೀವಿ ಅವರಿಗೆ. ಮೊದಲ ಸಂಬಳ ಪಡೆದ ಖುಷಿಯಲ್ಲಿ ಮನೆಗೆ ಹೋದ ಚಿರು ಅದನ್ನು ಅಪ್ಪ-ಅಮ್ಮನ ಕೈಯಲ್ಲಿಟ್ಟು ಆಶೀರ್ವಾದ ಪಡೆದುಕೊಂಡರಂತೆ. 1983ರಲ್ಲಿ ತೆರೆಕಂಡ ಖೈದಿ ಚಿತ್ರ ಚಿರು ಸಿನಿ ಜೀವನಕ್ಕೆ ಒಂದು ತಿರುವು ನೀಡಿತ್ತು. ನಂತರ ಹಿಂತಿರುಗಿ ನೋಡಲೇ ಇಲ್ಲ.

Trending

To Top