Karnataka

ಇಂದು ಎಲ್ಲರೂ ಜಾತಿ-ಧರ್ಮ ಮರೆತು ದೀಪ ಬೆಳಗಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದ್ದಾರೆ

ಇಂದು ಎಲ್ಲರೂ ಜಾತಿ-ಧರ್ಮ ಮರೆತು ದೀಪ ಬೆಳಗಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆ ಕೊಟ್ಟಿದ್ದಾರೆ.

ಮನೆಯ ಲೈಟ್ ಆರಿಸಿ ದೀಪ ಬೆಳಗಿ. ಜೊತೆಗೆ ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ ಅನ್ನೋ ಮಾತಿದೆ. ಯಾವ ಜಾತಿ, ಮತ, ಸಂಪ್ರದಾಯವಿದ್ದರೂ ಅವನ ಮನೆಯ ಜ್ಯೋತಿ ಒಂದೇ ಆಗಿರುತ್ತದೆ. ಹೀಗಾಗಿ ನಮ್ಮ ಅಂತಸ್ತು, ಪ್ರಾದೇಶಿಕ ವಿಚಾರಗಳನ್ನ ಮರೆತು ಮನೆಯಲ್ಲಿ ಜ್ಯೋತಿ ಹಚ್ಚಬೇಕು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ, ನಾವೆಲ್ಲರೂ ರಾತ್ರಿ ಸಣ್ಣ ಜ್ಯೋತಿ ಹಚ್ಚಿದರೆ, ಆ ಜ್ಯೋತಿ ನಮ್ಮ ಮನೆ, ಮನೆಯ ಸದಸ್ಯರ ಮನಸ್ಸಿಗೆ ಬೆಳಕನ್ನ ಕೊಡುತ್ತೆ. ಎಲ್ಲರೂ ದಯವಿಟ್ಟು ಇದನ್ನ ಪ್ರೀತಿಯಿಂದ ಆಸ್ವಾದಿಸಿ, ಆನಂದಿಸಿ. ದೀಪ ಹಚ್ಚಿ ಮನಸ್ಸಿನ ಕತ್ತಲೆ ಓಡಿಸಿ, ರಾಕ್ಷಸ ಕೊರೊನಾ ವೈರಸ್ ಕೂಡ ಓಡಿಸಿ ಎಂದ್ದಿದ್ದಾರೆ.

ಹಾಗೂ ಧರ್ಮಸ್ಥಳ ಕ್ಷೇತ್ರದಲ್ಲಿ ಕೂಡ ಜ್ಯೋತಿ ಬೆಳಗುತ್ತೇವೆ. ಇದರಿಂದ ಈ ನಾಡಿಗೆ ಶುಭವಾಗಲಿ ಅಂತ ಹಾರೈಸ್ತೇವೆ ಎಂದು ಹೇಳಿದ್ದಾರೆ.

Trending

To Top