Kannada Reality Shows

ಇಂಗ್ಲಿಷ್ ಕಲಿಸಿದ ‘ಬಿಗ್ ಬಾಸ್’ ಟೀಚರ್ ಕುರಿ ಪ್ರತಾಪ್

‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ಲಕ್ಸುರಿ ಬಜೆಟ್ ಟಾಸ್ಕ್ ‘ಬಿಗ್ ಬಾಸ್ ಶಾಲೆ’ ನಡೆಯುತ್ತಿದ್ದು ಕುರಿ ಪ್ರತಾಪ್ ಇಂಗ್ಲಿಷ್ ಟೀಚರ್ ಆಗಿ ಗಮನಸೆಳೆದಿದ್ದಾರೆ.

ಅವರು ಇಂಗ್ಲಿಷ್ ನಲ್ಲಿ ಮಾತನಾಡಿದ ತಮಾಷೆ ಪ್ರಸಂಗಗಳು ರಂಜಿಸಿವೆ ಶೈನ್ ಶೆಟ್ಟಿ ಅವರು ಗಣಿತ ಶಿಕ್ಷಕರಾಗಿ, ಕಿಶನ್ ದೈಹಿಕ ಶಿಕ್ಷಕರಾಗಿ ಗಮನಸೆಳೆದಿದ್ದಾರೆ. ‘ಬಿಗ್ ಬಾಸ್’ ಮನೆಗೆ ಶೈನ್ ಶೆಟ್ಟಿ ಅವರ ತಾಯಿ ಬಂದಿದ್ದು ಮಗನನ್ನು ಕಂಡು ಭಾವುಕರಾಗಿದ್ದಾರೆ. ಮನೆಯ ಸ್ಪರ್ಧಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಅವರು ‘ಬಿಗ್ ಬಾಸ್’ ನಿಂದ ಹೊರಬಂದ ಬಳಿಕ ಎಲ್ಲರೂ ಮನೆಗೆ ಬನ್ನಿ ಎಂದು ಹೇಳಿದ್ದಾರೆ. ಭೂಮಿ ಶೆಟ್ಟಿಗೆ ಇಷ್ಟವಾದ ಮೀನು ಮಾಡಿಕೊಡುವುದಾಗಿಯೂ ತಿಳಿಸಿದ್ದಾರೆ. ಹೋಟೆಲ್ ವ್ಯಾಪಾರ ಜಾಸ್ತಿಯಾದ ಬಗ್ಗೆ ಶೈನ್ ಶೆಟ್ಟಿಗೆ ತಿಳಿಸಿದ್ದಾರೆ.

ಕಿಶನ್ ಪೀಟಿ ಮಾಸ್ಟರ್ ಆಗಿ ಸ್ಪರ್ಧಿಗಳಿಗೆ ವಿವಿಧ ಚಟುವಟಿಕೆಗಳನ್ನು ಮಾಡಿಸಿದ್ದು, ಈ ವೇಳೆ ಚಂದನ್ ಬಾಲು ತೆಗೆದು ಹಾಕುವಾಗ ಅಡ್ಡಾದಿಡ್ಡಿಯಾಗಿ ಉರುಳಾಡಿದ್ದು ತಮಾಷೆಯಾಗಿತ್ತು.

Trending

To Top