Kannada Updates
Kannada Serials

ಆರ್ಯವರ್ಧನ್ ಮತ್ತು ಅನು ಪ್ರೀತಿಯಲ್ಲಿ ಬಿರುಕು ?

45 ವರ್ಷದ ಪುರುಷನನ್ನು 20 ವರ್ಷದ ಹುಡುಗಿ ಮದುವೆಯಾಗುತ್ತಾಳೆ ಎಂದರೆ ಎಲ್ಲರೂ ಒಪ್ಪಲಾರರು. ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಇದೇ ಕಥೆಯ ತಿರುಳು. ಇಂದು ಈ ಧಾರಾವಾಹಿ ಯಶಸ್ವಿಯಾಗಿ ನೂರು ಎಪಿಸೋಡ್‌ಗಳನ್ನು ಪೂರೈಸಿದೆ. ಆರಂಭದಿಂದಲೂ ಟಿಆರ್‌ಪಿ ವಿಚಾರದಲ್ಲಿ ಈ ಧಾರಾವಾಹಿ ಅಗ್ರಗಣ್ಯ ಸ್ಥಾನದಲ್ಲಿತ್ತು. ಈ ಧಾರಾವಾಹಿ ನಟ ಅನಿರುದ್ಧ ಮತ್ತು ನಟಿ ಮೇಘಾ ಶೆಟ್ಟಿ ಅವರನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಈ ಸೀರಿಯಲ್‌ನ ಟೈಟಲ್‌ ಟ್ರ್ಯಾಕ್‌ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಆದರೆ ದಿನದಿಂದ ದಿನಕ್ಕೆ ಕಥೆಯಲ್ಲಿ ನಂಬಲಾರದ ಟ್ವಿಸ್ಟ್ ಸಿಗುತ್ತಿದೆ.

ನೀಲ್ ನಿಜವಾದ ವ್ಯಕ್ತಿತ್ವ ಏನು?

ಅನು ಸಿರಿಮನೆಯನ್ನು ಪ್ರೀತಿಸುತ್ತಿರುವ ವಿಚಾರವನ್ನೇ ಆರ್ಯವರ್ಧನ್ ಅವರೇ ಬಾಯಿಬಿಟ್ಟಿದ್ದಾರೆ. ಆದರೆ ಇದು ಎಲ್ಲರ ಮುಂದೆ ಬಹಿರಂಗವಾಗಬೇಕಷ್ಟೇ. ಇವರಿಬ್ಬರನ್ನು ದೂರಮಾಡಲು ಝೇಂಢೇ, ಮೀರಾ ಪ್ರಯತ್ನ ಮಾಡುತ್ತಿದ್ದಾರೆ. ಇದರ ಮಧ್ಯೆ ನೀಲ್ ಎಂಬಾತ ಆರ್ಯವರ್ಧನ್ ಕಂಪೆನಿಯಲ್ಲಿ ಕೆಲಸ ಮಾಡೋದಿಕ್ಕೆ ಬಂದಿದ್ದಾನೆ. ಅನುಳನ್ನು ಆತ ಇಷ್ಟಪಡುತ್ತಿದ್ದಾನೆ. ಇದನ್ನು ಆರ್ಯವರ್ಧನ್ ಸಹಿಸುತ್ತಿಲ್ಲ. ಆರ್ಯವರ್ಧನ್ ಮತ್ತು ಅನು ಮಧ್ಯೆ ನೀಲ್ ಬಂದಿದ್ದರಿಂದ ಇವರಿಬ್ಬರ ನಡುವಿನ ಅಂತರ ಜಾಸ್ತಿಯಾಗಬಹುದು. ನೀಲ್ ವರ್ತನೆ ನೋಡುತ್ತಿದ್ದರೆ ಈ ಕಂಪೆನಿಗೆ ಬಂದಿದ್ದರ ಹಿಂದೆ ದೊಡ್ಡ ಕೈವಾಡವಿರೋದಂತೂ ನಿಜ ಎಂಬ ಅನುಮಾನ ಕಾಡುತ್ತಿದೆ.

ಆರ್ಯ-ಅನು ಪ್ರೀತಿಗೆ ಹುಳಿ ಹಿಂಡಿದ ಜೇಂಡೇ

ಅನು ವರ್ತನೆ ಕಂಡು ಅವಳ ಪಾಲಕರು ಈಗಾಗಲೇ ಸ್ವಲ್ಪ ಚಿಂತೆಗೀಡಾಗಿದ್ದಾರೆ. ಈ ನಡುವೆ ಜೇಂಡೇ ಕೂಡ ಅನು ಅಪ್ಪ-ಅಮ್ಮನ ಬಳಿ ಆರ್ಯವರ್ಧನ್ ಜೊತೆ ಅನು ಒಬ್ಬಳೇ ಲಂಡನ್‌ಗೆ ಹೋಗುತ್ತಿದ್ದಾಳೆ ಎಂದು ಹೇಳಿದ್ದಾರೆ. ತಂದೆ-ತಾಯಿ ಮತ್ತು ಮಗಳ ನಡುವೆ ತಂದಿಟ್ಟು ನೋಡುವ ಕೆಲಸವನ್ನು ಜೇಂಡೇ ಮಾಡುತ್ತಿದ್ದಾರೆ. ಹಾಗಾದರೆ ಅನು ಮತ್ತು ಆರ್ಯ ಲಂಡನ್‌ಗೆ ಹೋಗೋದು ನಿಜಾನಾ? ಲಂಡನ್‌ನಲ್ಲಿ ಧಾರಾವಾಹಿ ಶೂಟ್ ನಡೆಯುವ ಸಾಧ್ಯತೆಯಿದೆ. ಈ ಹಿಂದೆ ಕೂಡ ಕನ್ನಡದ ಕೆಲ ಧಾರಾವಾಹಿಗಳ ಶೂಟಿಂಗ್ ವಿದೇಶಗಳಲ್ಲಿ ನಡೆದಿತ್ತು. ಅಥವಾ ಆರ್ಯವರ್ಧನ್ ಜೊತೆಗೆ ಮೀರಾ ಲಂಡನ್‌ಗೆ ಹೋಗಬಹುದು. ಅನು ಮತ್ತ ಆರ್ಯ ದೂರ ದೂರ ಇದ್ದಾಗ ಪೇಚಾಡುವ, ನರಳಾಡುವ ಪರಿಸ್ಥಿತಿಯನ್ನು ಮುಂದಿನ ದಿನಗಳ ಎಪಿಸೋಡ್‌ನಲ್ಲಿ ತೋರಿಸಬಹುದು.

Related posts

ಹೊಸ ಅವತಾರದಲ್ಲಿ ನಾಗಿಣಿ 2

Pooja Siddaraj

ತಂದೆಯಾದ ಸಂಭ್ರಮದಲ್ಲಿ ವಿಜಯ್ ಸೂರ್ಯ!

Pooja Siddaraj

ಕನ್ನಡ ನಟಿ ಅಮೂಲ್ಯ ಅವರ ಸಹೋದರಿ ಕಿರುತೆರೆಯಲ್ಲಿ ಬಹಳ ದೊಡ್ಡ ನಟಿ! ಯಾರು ಗೊತ್ತಾ

webadmin

ಕುಟುಂಬದ ಸಮೇತ ಗಣೇಶ ಹಬ್ಬ ಆಚರಣೆ ಮಾಡಿದ ಜೊತೆಜೊತೆಯಲಿ ಅನಿರುಧ್ ಕುಟುಂಬ! ಸುಂದರ ಕ್ಷಣಗಳು ನೋಡಿ

webadmin

ಜೊತೆ ಜೊತೆಯಲಿ ಪ್ರಸಾರ ನಿಲ್ಲುವುದರ ಕುರಿತು ನಟ ಅನಿರುದ್ಧ ಹೇಳಿದ್ದೇನು ?

Pooja Siddaraj

ಸಿಲ್ಲಿ ಲಲ್ಲಿ ಖ್ಯಾತಿಯ NML ನಮಿತಾ ರಾವ್, ಈಗ ಎಲ್ಲಿದ್ದಾರೆ, ಹೇಗ್ ಇದ್ದಾರೆ, ಏನು ಮಾಡ್ತಾ ಇದ್ದಾರೆ ನೋಡಿ!

webadmin

ಕುಟುಂಬದ ಜೊತೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಹೋದ ಜೊತೆಜೊತೆಯಲಿ ಅನಿರುಧ್ ಕುಟುಂಬ! ಸುಂದರ ಕ್ಷಣಗಳನ್ನು ನೋಡಿ

webadmin

ಹೊಸ ಎಪಿಸೋಡ್ ಗಳು ಯಾವಾಗಿನಿಂದ ಆರಂಭವಾಗುತ್ತದೆ ಎಂದು ಕೇಳಿದ ಅಭಿಮಾನಿಗೆ ನಟ ಅನಿರುದ್ಧ್ ಹೇಳಿದ್ದೇನು?

Pooja Siddaraj

ಫ್ರೆಂಚ್ ಬಿರಿಯಾನಿ ನಟಿ ದಿಶಾ ಮದನ್ ಮಗುವಿನ ಹುಟ್ಟುಹಬ್ಬ ಹೇಗಿತ್ತು ನೋಡಿ!

webadmin

ಗೆಳೆಯರ ಹಾಗು ಧಾರಾವಾಹಿ ನಟರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ‘ಲಕ್ಷ್ಮೀ ಬಾರಮ್ಮ’ ನಟಿ ನೇಹಾ ಗೌಡ!

webadmin

ಗಟ್ಟಿಮೇಳ ಧಾರಾವಾಹಿಯಲ್ಲಿ ಚಿನ್ನಾರಿಮುತ್ತ

Pooja Siddaraj

ಜೊತೆ ಜೊತೆಯಲಿ ಅನು ಸಿರಿಮನೆ – ಮೇಘಾ ಶೆಟ್ಟಿ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

webadmin