News

ಆಧಾರ್ ಕಾರ್ಡ್ ಹೊಂದಿರುವವರು ಈ ಸುದ್ದಿ ತಪ್ಪದೆ ಓದಿ

ಕೆವೈಸಿ ದೃಢೀಕರಣಕ್ಕಾಗಿ ಆಧಾರ್ ಬಳಸುವಂತೆ ಹಣಕಾಸು ಸಚಿವಾಲಯ ವತಿಯಿಂದ ವಿಮಾ ಕಂಪನಿಗಳಿಗೆ ಅನುಮತಿ ನೀಡಲಾಗಿದೆ.

ಗ್ರಾಹಕರ ಕೆವೈಸಿ ದೃಢೀಕರಣಕ್ಕೆ ಆಧಾರ್ ಕಾರ್ಡ್ ಬಳಸುವಂತೆ 29 ವಿಮಾ ಸಂಸ್ಥೆಗಳು ಮತ್ತು 9 ಸ್ಟಾಕ್ ಮತ್ತು ಸೆಕ್ಯೂರಿಟೀಸ್ ಘಟಕಗಳಿಗೆ ಹಣಕಾಸು ಮಂತ್ರಾಲಯದ ವತಿಯಿಂದ ಅನುಮತಿ ನೀಡಲಾಗಿದೆ.

ಇದರಿಂದಾಗಿ ಗ್ರಾಹಕರು ತಮ್ಮ ದಾಖಲೆಗಳನ್ನು ಸಲ್ಲಿಸುವ ಪರದಾಟ ತಪ್ಪಲಿದೆ. ಮಾತ್ರವಲ್ಲ ಸಮಯ ಮತ್ತು ವೆಚ್ಚವೂ ಉಳಿತಾಯವಾಗುತ್ತದೆ ಎಂದು ಆಧಾರ್ ಮಾಜಿ ಮುಖ್ಯ ಕಾರ್ಯನಿರ್ವಾಹಕ ಹಾಗೂ ಹಣಕಾಸು ಮಂತ್ರಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ. ಆಧಾರ್ ದೃಢೀಕರಣಕ್ಕೆ ಬಜಾಜ್, ಎಕ್ಸೈಡ್, ಹೆಚ್.ಡಿ.ಎಫ್.ಸಿ. ಸೇರಿದಂತೆ 29 ಕಂಪನಿಗಳಿಗೆ ಅನುಮತಿ ನೀಡಲಾಗಿದೆ.

Trending

To Top