Film News

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಕರೆ ಮಾಡಿದ್ದರು ನಟಿ ಸಿಲ್ಕ್ ಸ್ಮಿತಾ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಮರೆಯಲಾಗದ ಹೆಸರು ಸಿಲ್ಕ್ ಸ್ಮಿತಾ. ಬಹುಭಾಷಾ ನಟಿಯಾಗಿದ್ದ ಸಿಲ್ಕ್ ಸ್ಮಿತಾ
200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ಆತ್ಮಹತ್ಯೆಗೆ ಶರಣಾದರು ಸ್ಮಿತಾ. ಅವರ ಸಾವಿನ ಸುದ್ದಿ ತಿಳಿದು ಕಾರಣ ತಿಳಿಯದೆ ಇಡೀ ಸಿನಿ ರಂಗವೇ
ನೋವಿನಲ್ಲಿತ್ತು.

ಬಡ ಕುಟುಂಬದಿಂದ ಬಂದಿದ್ದ ಸಿಲ್ಕ್ ಸ್ಮಿತಾ ಬಯಸಿದ್ದು ನಾಯಕಿಯಾಗಬೇಕೆಂದು. ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಕನ್ನಡದಲ್ಲೂ ಸ್ಮಿತಾ ನಟಿಸಿದ್ದರು. ಕನ್ನಡದಲ್ಲಿ ರವಿಚಂದ್ರನ್ ಅವರೊಂದಿಗೆ ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ನಟಿಸಿದ್ದರು ಸಿಲ್ಕ್ ಸ್ಮಿತಾ.

ಇದರಿಂದಾಗಿ ರವಿಚಂದ್ರನ್ ನಟ್ಟಿ ಸಿಲ್ಕ್ ಸ್ಮಿತಾ ಅವರ ನಡುವೆ ಒಳ್ಳೆಯ ಸ್ನೇಹವಿತ್ತು. ಆ ಸ್ನೇಹದಿಂದಲೇ ಆಗಾಗ ರವಚಂದ್ರನ್ ಅವರಿಗೆ ಕರ್ರ್ ಮಾಡುತ್ತಿದ್ದರು ಸಿಲ್ಕ್ ಸ್ಮಿತಾ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಂದರೆ 1996 ಸೆ. 23 ರಂದು ಸ್ಮಿತಾ ರವಿಚಂದ್ರನ್ ಅವರಿಗೆ ಕರೆ ಮಾಡಿದ್ದರಂತೆ. ಆದರೆ ಅಂದು ರವಿಚಂದ್ರನ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ಮಾತನಾಡಲಾಗಲಿಲ್ಲ. ನಂತರ ಕರೆ ಮಾಡಲು ಯತ್ನಿಸಿದರೂ ನೆಟ್ವರ್ಕ್ ಸಮಸ್ಯೆಯಿಂದ ಕರೆ ಸಿಗಲಿಲ್ಲ. ಅಂದು ಆ ಕರೆಯನ್ನು ರಿಸೀವ್ ಮಾಡಿದಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತೇನೋ ಎಂದು ರವಿಮಾಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಸ್ಮಿತಾ ಬಗ್ಗೆ ನೆನಸಿಕೊಂಡಾಗಲೆಲ್ಲ ಅವರ ಸಾವು ನನ್ನನ್ನು ಕಾಡುತ್ತದೆ. ಆಕೆ ಎಂದರೆ ಇಷ್ಟಪಡವರು ಸಿನಿ ರಂಗದಲ್ಲಿ ಸಾಕಷ್ಟು ಮಂದಿ ಇದ್ದರು. ಕಾರಣ ಆಕೆಗಿದ್ದ ಸಿಟ್ಟು. ಆದರೆ ಸ್ಮಿತಾ ಎದುರಿನವರಿಂದ ಬಯಸುತ್ತಿದ್ದದ್ದು ಕೇವಲ ಗೌರವ ಹಾಗೂ ಪ್ರೀತಿ. ನಾನು ಅವರನ್ನು ಗೌರವದಿಂದ ಕಾಣುತ್ತಿದ್ದೆ. ಇದೇ ಕಾರಣಕ್ಕೆ ಇರಬೇಕು ನಮ್ಮಿಬ್ಬರ ನಡುವೆ ಸ್ನೇಹ ಬೆಳೆಯಲು ಕಾರಣವಾಗಿದ್ದು. ಅವರು ನನ್ನೊಂದಿಗೆ ಅಷ್ಟು ಆತ್ಮೀಯವಾಗಿದ್ದರು. ಅದಕ್ಕೆ, ಸಾವಿನ ಮುನ್ನ ಅವರು ನನಗೆ ಕರೆ ಮಾಡಿದ್ದು ಎಂದಿದ್ದಾರೆ ರವಿಚಂದ್ರನ್.

Trending

To Top