Film News

ಅರ್ಜುನ್ ಜನ್ಯ ಆರೋಗ್ಯದಲ್ಲಿ ಚೇತರಿಕೆ! ಇಂದು ಸಂಜೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ .

ಲಘು ಹೃದಯಾಘಾತವಾದ ಹಿನ್ನೆಲೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಅರ್ಜುನ್ ಜನ್ಯ ಹೃದಯ ಸಂಬಂಧಿ, ಗ್ಯಾಸ್ಟ್ರಿಕ್, ತಲೆ ಹಾಗೂ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ, ಆರೋಗ್ಯ ಸ್ಥಿರವಾಗಿದ್ದು ವೈದ್ಯರ ಸಲಹೆಯಂತೆ ಕೆಲಕಾಲ ಓಡಾಡಿದ್ದಾರೆ ಎನ್ನಲಾಗಿದೆ. ಅರ್ಜುನ್ ಜನ್ಯ ಅವರನ್ನ ವೈದ್ಯರು ವಾರ್ಡ್​ಗೆ ಶಿಫ್ಟ್ ಮಾಡಿ ಅಬ್ಸರ್ವೇಷನ್​ನಲ್ಲಿ ಇಟ್ಟಿದ್ದರು. ಇಂದೂ ಸಹ ಕೆಲವು ಪರೀಕ್ಷೆಗಳನ್ನ ವೈದ್ಯರು ಮಾಡಲಿದ್ದಾರಂತೆ.. ಸಂಜೆಯೊಳಗೆ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

Trending

To Top