Kannada Reality Shows

ಅಮ್ಮನ ನೋಡಿ ಬಿಕ್ಕಿ ಬಿಕ್ಕಿ ಅತ್ತ ಶೈನ್‌ ಶೆಟ್ಟಿ.. ಬಿಗ್‌ಬಾಸ್ ಮನೆಯಲ್ಲಿ ತಾಯಿ-ಮಗನ ಸಮ್ಮಿಲನ..!

ಬಿಗ್‌ಬಾಸ್‌ ಮನೆ ಈಗ ಸ್ಕೂಲ್ ಆಗಿದೆ. ಶಾಲೆ ಅಂದ್ಮೇಲೆ ಮಕ್ಕಳ ಆಟ, ಹುಡುಗಾಟ, ತುಂಟಾಟ ಇದ್ದಿದ್ದೇ. ಜೊತೆಗೆ ಮಕ್ಕಳ ಏನೇ ತಪ್ಪು ಮಾಡಿದ್ರು ಪೋಷಕರಿಗೆ ಕಂಪ್ಲೇಂಟ್ ಹೋಗೋದು ಮಾಮೂಲಿ. ಅದರಂತೆ ಬಿಗ್‌ಬಾಸ್‌ ಶಾಲೆಗೆ ತುಂಟ ಹುಡ್ಗ ಶೈನ್‌ ಶೆಟ್ಟಿ ಅವರ ತಾಯಿ ಬಂದಿದ್ದಾರೆ. ಕಂಪ್ಲೇಂಟ್‌ ಏನು ಅಂತಾ ಕೇಳೋದಕ್ಕೆ ಅಲ್ಲಾ! ಬಟ್‌ ಮಗನನ್ನ ಕಣ್ತುಂಬಿ ನೋಡೋದಕ್ಕೆ.

ಹೌದು, ಶೈನ್‌ ಶೆಟ್ಟಿ ಅವರ ತಾಯಿಗೆ ಮಗನನ್ನ ಬಿಗ್‌ಬಾಸ್‌ನಲ್ಲಿಯೇ ಭೇಟಿಯಾಗುವ ಅವಕಾಶ ಸಿಕ್ಕಿದೆ. ಸ್ಪರ್ಧಿಗಳ ಫ್ಯಾಮಿಲಿ ಮೆಂಬರ್ಸ್‌ ಬಿಗ್‌ಬಾಸ್‌ ಮನೆಗೆ ಬರ್ತಿದ್ದಾರೆ. ನಿನ್ನೆ ಹರೀಶ್ ರಾಜ್ ಅವರ ಪತ್ನಿ ಮತ್ತು ಮಗಳು ಬಂದಿದ್ದರು. ಇವತ್ತಿನ ಎಪಿಸೋಡ್‌ನಲ್ಲಿ ಕುಂದಾಪುರದ ಕುವರ ಶೈನ್‌ ಶೆಟ್ಟಿ ಅವರ ತಾಯಿ ಬಿಗ್‌ಬಾಸ್‌ ಮನೆಗೆ ಬಂದಿದ್ದ ಕ್ಷಣಗಳು ಪ್ರಸಾರವಾಗಲಿದೆ. ಮಗನಿಗಾಗಿ ಫಿಶ್‌ ತಂದಿರೋ ತಾಯಿ, ಅಪ್ಪಿ ಮುದ್ದಾಡಿ ಕಣ್ಣೀರಿಟ್ಟಿದ್ದಾರೆ.

ಶೈನ್ ಕೂಡ ಭಾವುಕರಾಗಿದ್ದಾರೆ. ಶೈನ್‌ ಅಭಿಮಾನಿಗಳಿಗೆ ಇವತ್ತಿನ ಎಪಿಸೋಡ್‌ ಮಸ್ಟ್‌ ವಾಚ್‌.

Trending

To Top