Film News

ಅಭಿಮಾನಿಗಳಲ್ಲಿ ಒಂದು ಮುಖ್ಯವಾದ ಮನವಿ ಮಾಡಿದ್ದಾರೆ ನಟ ಅಜಿತ್

ದೇಶವಿಡೀ ಕೊರೋನಾದಿಂದ ಸಂಕಷ್ಟದಲ್ಲಿದೆ. ಜನರು ಮನೆಯಿಂದ ಹೊರಬರಲು ಭಯ ಬೀಳುವಂತಾಗಿದೆ. ಹಾಗಿದ್ದರೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬರ್ತ್ ಡೇ ಸಂಭ್ರಮಾಚರಣೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿಲ್ಲ.

ಇದೀಗ ತಮಿಳು ನಟ ‘ತಲಾ’ ಅಜಿತ್ ಗೂ ಇಂತಹದ್ದೇ ಪರಿಸ್ಥಿತಿ ಎದುರಾಗಿದೆ. ಕೊರೋನಾದಿಂದಾಗಿ ಲಾಕ್ ಡೌನ್ ಜಾರಿಯಲ್ಲಿದ್ದರೂ ತಮ್ಮ ಬರ್ತ್ ಡೇ ಆಚರಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ. ಮೇ 1 ರಂದು ಅಜಿತ್ ಬರ್ತ್ ಡೇ ಇದ್ದು, ಅಭಿಮಾನಿಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ.

ಹೀಗಾಗಿ ತಮ್ಮ ವಕ್ತಾರರ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಅಜಿತ್ ಕೊರೋನಾದಿಂದ ಎಲ್ಲರೂ ಸಂಕಷ್ಟಕ್ಕೀಡಾಗಿರುವ ಈ ಪರಿಸ್ಥಿತಿಯಲ್ಲಿ ಯಾರೂ ಬರ್ತ್ ಡೇ ಆಚರಿಸಬೇಡಿ. ಸೋಷಿಯಲ್ ಮೀಡಿಯಾದಲ್ಲಿ ಕಾಮನ್ ಡಿಪಿ ಬಿಡುಗಡೆ ಮಾಡುವುದು ಇತ್ಯಾದಿಗಳನ್ನು ಮಾಡಬೇಡಿ. ಸಂಭ್ರಮಾಚರಿಸಲು ಇದು ಸಮಯವಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ.

Trending

To Top