ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಭಾವುಕರಾದ ಶಿವಣ್ಣ-ಗೀತಾ, ಅಪ್ಪು ನಮ್ಮಲ್ಲಿಯೇ ಇದ್ದಾರೆ ಎಂದ ಶಿವಣ್ಣ……!

Follow Us :

ಖ್ಯಾತ ಸ್ಯಾಂಡಲ್ ವುಡ್ ನಟ ದಿವಂಗತ ಪುನೀತ್ ರಾಜ್ ಕುಮಾರ್‍ ರವರು ಇಹಲೋಕ ತ್ಯೇಜಿಸಿ ಇಂದಿಗೆ ಎರಡು ವರ್ಷಗಳು ತುಂಬಿದೆ. ಅ.29 ರಂದು ಅವರ 2ನೇ ವರ್ಷದ ಪುಣ್ಯಸ್ಮರಣೆ ನಡೆದಿದ್ದು, ಅವರ ಕೋಟ್ಯಂತರ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಶ್ರದ್ದಾಂಜಲಿಯನ್ನು ಅರ್ಪಿಸಿದ್ದಾರೆ. ಡಾ.ರಾಜ್ ಕುಮಾರ್‍ ಕುಟುಂಬದಿಂದಲೂ ಸಹ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಪ್ಪು ಸ್ಮಾರಕದ ಬಳಿಕ ನೂರಾರು ಸಂಖ್ಯೆಯ ಅಭಿಮಾನಿಗಳು ಬಂದು ನಮನ ಸಲ್ಲಿಸಿದ್ದಾರೆ.

ದಿವಂಗತ ಅಪ್ಪು ಸ್ಮಾರಕದ ಬಳಿ ರಾಜ್ ಕುಮಾರ್‍ ಕುಟುಂಬ ಬಂದು ವಿಶೇಷ ಪೂಜೆ ಸಲ್ಲಿಸಿ ಅಪ್ಪು ರವರಿಗೆ ಇಷ್ಟವಾದ ತಿಂಡಿ-ತಿನ್ನಿಸುಗಳನ್ನು ಸಮಾದಿ ಬಳಿ ಇಟ್ಟಿದ್ದಾರೆ. ಜೊತೆಗೆ ಅನೇಕ ಅಭಿಮಾನಿಗಳು ಪುನೀತ್ ರವರಿಗೆ ಬಿರಿಯಾನಿ ಇಷ್ಟ ಎಂಬ ಕಾರಣದಿಂದ ಅನೇಕ ಕಡೆ ಬಿರಿಯಾನಿ ಊಟ ಸಹ ಹಾಕಿಸಿದ್ದಾರೆ. ಅಪ್ಪು ಸ್ಮಾರಕದ ಬಳಿ ಪುನೀತ್ ರವರ ಪತ್ನಿ ಅಶ್ವಿನಿ, ಪುತ್ರಿ ವಂದಿತಾ, ಡಾ.ಶಿವರಾಜ್ ಕುಮಾರ್‍, ರಾಘವೇಂದ್ರ ರಾಜಕುಮಾರ್‍, ಯುವ ರಾಜಕುಮಾರ್‍, ಅಪ್ಪು ಸಹೋದರಿಯರಾದ ಲಕ್ಷ್ಮೀ, ಪೂರ್ಣಿಮಾ ಸೇರಿದಂತೆ ಅನೇಕರು ಕುಟುಂಬಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಡಾ.ಶಿವರಾಜ್ ಕುಮಾರ್‍ ರವರು ಅಪ್ಪು ಸಮಾದಿಗೆ ಪೂಜೆ ಮಾಡುವದಕ್ಕೂ ಮುಂಚೆ ತಂದೆಯಾದ ಡಾ.ರಾಜ್ ಕುಮಾರ್‍ ಹಾಗೂ ತಾಯಿ ಪಾರ್ವತಮ್ಮ ಸಮಾಧಿಯ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಪತ್ನಿ ಸಮೇತ ಬಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಶಿವಣ್ಣ, ಅಭಿಮಾನಿಗಳಿಗೆ ಅಪ್ಪು ಮೇ ಇರುವಂತಹ ವಿಶ್ವಾಸ, ಪ್ರೀತಿಯನ್ನು ನೋಡಿದರೇ ತುಂಬಾನೆ ಹೆಮ್ಮೆಯಾಗುತ್ತದೆ. ಅದನ್ನು ನಾವು ಉಳಿಸಿಕೊಂಡು ಹೋಗುತ್ತೇವೆ. ಅಪ್ಪು ಚಿಕ್ಕ ವಯಸ್ಸಿನಲ್ಲೇ ಅಪ್ಪಾಜಿಗಿಂತಲೂ ಹೆಚ್ಚು ಹೆಸರು ಮಾಡಿರುವುದು ನನಗೆ ತುಂಬಾ ಖುಷಿಯ ವಿಚಾರವಾಗಿದೆ. ಅಪ್ಪು ಇಲ್ಲ ಅಂತ ನಮಗೆ ಅನಿಸೋದೇ ಇಲ್ಲ, ಅಪ್ಪು ಎಲ್ಲಿಯೂ ಹೋಗಿಲ್ಲ. ನಮ್ಮಲ್ಲಿಯೇ ಇದ್ದಾನೆ ಎಂದು ಹೇಳಿ ಭಾವುಕರಾದರು.