Film News

‘ಅಪ್ಪು’ ಚಿತ್ರ ತೆರೆಕಂಡು ಇಂದಿಗೆ 18 ವರ್ಷ!

ನಮ್ಮ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಪ್ರಪ್ರಥಮ ಬಾರಿಗೆ ನಾಯಕ ನಟರಾಗಿ ಪಾದಾಪ೯ಣೆ ಮಾಡಿದ ಚಿತ್ರ, ಅವರನ್ನು ನಾವು ಮುದ್ದಿನಿಂದ ಕರೆಯುವ ಹೆಸರೇ “ಅಪ್ಪು” . ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 18 ವಷ೯ಗಳು. ಮೊದಲನೇ ಚಿತ್ರದಲ್ಲೇ ಪವರ್ ಫುಲ್ ಶೋ ನೀಡಿದ್ದರು ಅಪ್ಪು.

ನಿಮಗೆ ಗೊತ್ತಾ? ಅಪ್ಪು ಚಿತ್ರಕ್ಕೆ ನಾಯಕಿಯಾಗಿ ಮೊದಲು ಆಯ್ಕೆಯಾಗಿದ್ದವರು ರಮ್ಯಾ, ಆದರೆ ಕಾರಣಾಂತರಗಳಿಂದ ರಕ್ಷಿತಾ ಅವರನ್ನು ಫೈನಲ್ ಆಗಿ ಆಯ್ಕೆ ಮಾಡಲಾಯಿತು.

ಅಪ್ಪುರವರ ನಟನೆ, ಫೈಟ್ಸ್, ಡಾನ್ಸ್ ಎಲ್ವವೂ ಸೂಪರ್, ಹೆಣ್ಣು ಮಕ್ಕಳ ಹೃದಯ ಕದ್ದವರು. ರಕ್ಷಿತಾ ರವರ ನಟನೆಗೆ ಹುಡುಗರು ಮನಸೋತಿದ್ದರು. ಡಾ.ರಾಜ್ ಕುಮಾರ್ ಹಾಡಿರುವ ಹಾಡುಗಳೂ ಒಂದಕ್ಕಿಂತ ಒಂದು ಚೆನ್ನಾಗಿದ್ದವು.

ತೆಲುಗು ಚಿತ್ರರಂಗದ ಜನಪ್ರಿಯ ನಿದೇ೯ಶಕರಾದ ಪೂರಿ ಜಗನ್ನಾಥ್ ರವರನ್ನು ಕನ್ನಡಕ್ಕೆ ತಂದವರು ಅಮ್ಮ ಪಾವ೯ತಮ್ಮ ರವರು, ಕನ್ನಡದ ನೇಟಿವಿಟಿ ತಕ್ಕ ಹಾಗೆ ಚಿತ್ರಕಥೆ ತಯಾರಿಸಿ ಪುನೀತ್ ರವರನ್ನು ತೆರೆಯ ಮೇಲೆ ಅಭಿಮಾನಿಗಳು ಹಬ್ಬ ಆಚರಿಸುವಂತೆ ನಿದೇ೯ಶನ ಮಾಡಿದರು, ಭಾರೀ ಯಶಸ್ಸು ಗಳಿಸಿದ ಚಿತ್ರ. ಮತ್ತೆ ಈ ಚಿತ್ರ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತೆರೆಕಂಡಿದೆ. ವಿಶೇಷ ಏನು ಅಂದ್ರೆ ,ಅಪ್ಪು ಚಿತ್ರದ ತೆಲುಗು ತಮಿಳು ಅವತರಣಿಕೆಯಲ್ಲೂ ಸಹ ರಕ್ಷಿತಾ ಅವರೇ ನಾಯಕಿಯಾದರು.

Trending

To Top