News

‘ಅಪರಾಜಿತಾ ಆಯೋಧ್ಯೆ’ ಚಿತ್ರ ನಿರ್ಮಾಪಕಿಯಾಗಲಿರುವ ಕಂಗಾನ ರನೌತ್

Kangana Ranault

ವೈವಿಧ್ಯಮಯ ಚಿತ್ರಗಳಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರನ್ನು ರಂಜಿಸುತ್ತಿರುವ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಹೊಸದಾಗಿ ರಾಮ ಮಂದಿರ-ಬಾಬರಿ ಮಸೀದಿ ವಿಷಯ ಆಧರಿಸಿ ಚಿತ್ರ ನಿರ್ಮಿಸಲು ಸಜ್ಜುಗೊಂಡಿದ್ದಾರೆ.

ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಸಿದ್ದಪಡಿಸುತ್ತಿರುವ “ಅಪರಾಜಿತ ಆಯೋಧ್ಯೆ” ಹೆಸರಿನ ಚಿತ್ರವನ್ನು ಮುಂದಿನ ವರ್ಷದ ಆರಂಭದಲ್ಲಿ ನಿರ್ಮಿಸಲು ಕಂಗಾನ ಸಿದ್ಧರಾಗುತ್ತಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಮತ್ತೊಂದೆಡೆ, ಕಂಗನಾ ಚಿತ್ರ ನಿರ್ಮಾಪಕಿಯೂ ಆಗಲಿದ್ದಾರೆ ಎಂದು ಸಹೋದರಿ ರಂಗೋಲಿ ಚಂದೇಲ್ ಟ್ವೀಟ್ ಮಾಡಿದ್ದಾರೆ. ಕಂಗನಾ ಅತಿ ಶೀಘ್ರದಲ್ಲಿಯೇ “ಅಪರಾಜಿತ ಅಯೋಧ್ಯೆ” ಯಾಗಿ ಬರಲಿದ್ದಾರೆ. ನಟ ನಟಿಯರು, ತಂತ್ರಜ್ಞರ ಕುರಿತು ಸಧ್ಯದಲ್ಲೇ ಪ್ರಕಟಣೆ ಹೊರಬೀಳಲಿದೆ.

“ಅಪರಾಜಿತ  ಅಯೋಧ್ಯೆ ವೈವಿಧ್ಯಮಯ ಚಿತ್ರವಾಗಿದ್ದು, ಸಿನಿಮಾ ನಿರ್ಮಾಣ ವಲಯ ಪ್ರವೇಶಿಸಲು ಇದು ಸರಿಯಾದ ಆರಂಭ ಎಂದು ಕಂಗನಾ ಹೇಳಿದ್ದಾರೆ, ಕಂಗಾನ ರನೌತ್ ಕಡೆಯದಾಗಿ ರಾಜ್ ಕುಮಾರ್ ರಾವ್ ಅವರೊಂದಿಗೆ ಏಕ್ತಾ ಕಪೂರ್ ನಿರ್ಮಿಸಿದ “ಜಡ್ಜ್ ಮೆಂಟಲ್ ಹೈ ಕ್ಯಾ” ಚಿತ್ರ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು.  ಮತ್ತೊಂದೆಡೆ, ಅವರು ತಮಿಳುನಾಡು ದಿ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಚರಿತ್ರೆ “ತಲೈವಿ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಲೈವಿ ಯಾಗಿ ಕಂಗನಾ ಫಸ್ಟ್‌ಲುಕ್ ಇತ್ತೀಚಿಗೆ ಬಿಡುಗಡೆಗೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Trending

To Top