Film News

ಅನಿರೀಕ್ಷಿತ ಸುದ್ದಿ ಕೊಟ್ಟ ದರ್ಶನ್ ಹಾಗೂ ತರುಣ್ ಸುಧೀರ್…!!!

ತರುಣ್ ಸುಧೀರ್ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಚಿತ್ರೀಕರಣ ಮುಗಿದಿದೆ. 180 ಕಲಾವಿದರು 108 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಶೂಟಿಂಗ್‌ನಲ್ಲಿ ಬೇರೆ ಬೇರೆ ಶೆಡ್ಯೂಲ್‌ನಲ್ಲಿ ಪಾಲ್ಗೊಂಡಿದ್ದರು. ಉಮಾಪತಿ ಫಿಲ್ಮ್ಸ್‌ನಡಿಲ್ಲಿ ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಪ್ರಾರಂಭವಾಗಿವೆ. ಈಗಾಗಲೇ ಪೋಸ್ಟರ್, ಫಸ್ಟ್‌ಲುಕ್ ಮೂಲಕ ರಾಬರ್ಟ್‌ ಸಿನಿಮಾ ಸಾಕಷ್ಟು ಕುತೂಹಲವನ್ನುಂಟು ಮಾಡಿದೆ.

ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಹೇಳಿದ್ದೇನು?

undefined

“ಇಂಥ ದೊಡ್ಡ ಪ್ರಾಜೆಕ್ಟ್‌ನ್ನು ಇಷ್ಟು ಕಡಿಮೆ ಸಮಯದಲ್ಲಿ ನಾವು ಮುಗಿಸಿರುವುದನ್ನು ಕಂಡು ಹಲವರು ಅಚ್ಚರಿಗೊಳಗಾಗಿದ್ದಾರೆ. ನನ್ನ ಪ್ಲ್ಯಾನಿಂಗ್ ಕಂಡು ಹಲವರು ಅಭಿನಂದಿಸಿದ್ದಾರೆ. ಆದರೆ ಇವೆಲ್ಲ ಎಲ್ಲ ನಿರ್ದೇಶಕರ ಪ್ಲ್ಯಾನ್ ಮೇಲೆ ಸಾಧ್ಯ ಆಗಿರುತ್ತದೆ. ನನ್ನ ಪ್ಲ್ಯಾನ್ ಅನುಷ್ಠಾನಕ್ಕೆ ಬಂದಿದ್ದು ಹೀರೋ ಮತ್ತು ನಿರ್ಮಾಪಕರ ಸಹಾಯದಿಂದ. ಈ ವಿಚಾರದಲ್ಲಿ ನಾನು ಅದೃಷ್ಟವಂತ. ದರ್ಶನ್ ಮತ್ತು ನಿರ್ಮಾಪಕರು ನನ್ನ ಮೇಲೆ ನಂಬಿಕೆ ಇಟ್ಟಿದ್ದರು” ಎಂದಿದ್ದಾರೆ ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್.

ದರ್ಶನ್ ಜೊತೆ ವಿನೋದ್ ಪ್ರಭಾಕರ್, ಜಗಪತಿಬಾಬು

undefined

ಏಪ್ರಿಲ್ 9ಕ್ಕೆ ಈ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ. ಜಗಪತಿ ಬಾಬು ಈ ಚಿತ್ರದಲ್ಲಿ ಖಳನಾಯಕನ ಪೋಷಾಕು ಧರಿಸಿದ್ದಾರೆ. ಆಶಾ ಭಟ್ ಅಭಿನಯದ ಮೊದಲ ಕನ್ನಡ ಚಿತ್ರವಿದು. ವಿನೋದ್ ಪ್ರಭಾಕರ್, ರವಿಕಿಶನ್, ಚಿಕ್ಕಣ್ಣ, ಶಿವರಾಜ್‌ ಕೆಆರ್‌ಪೇಟೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪಾಂಡಿಚೇರಿ, ಲಖನೌ, ಬೆಂಗಳೂರು, ಮೈಸೂರು, ಹೈದರಾಬಾದ್, ಚೆನ್ನೈ, ವಾರಣಾಸಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆದಿದೆ. ಸುಧಾಕರ್ ಎಸ್.ರಾಜ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದರೆ, ಅರ್ಜುನ್ ಜನ್ಯಾ ಮ್ಯೂಸಿಕ್ ನೀಡಿದ್ದಾರೆ. ಕೆ.ಎಂ.ಪ್ರಕಾಶ್ ಈ ಚಿತ್ರದ ಸಂಕಲನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

Trending

To Top