Film News

ಅನಾಥಾಶ್ರಮಗಳಿಗೆ ಪತ್ರ ಬರೆದ ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ಎಷ್ಟೋ ಅಭಿಮಾನಿಗಳು ಅವರ ಮನೆಗೆ ಧವಸ-ಧಾನ್ಯಗಳನ್ನು ತಂದು ಉಡುಗೊರೆಯಾಗಿ ನೀಡಿದ್ದಾರೆ.

ಈ ಸಾಮಗ್ರಿಗಳನ್ನು ಈಗ ದರ್ಶನ್ ತಮ್ಮ ಸಂಗಡಿಗರ ಮೂಲಕ ರಾಜ್ಯದ ಸುಮಾರು 60 ಕ್ಕೂ ಹೆಚ್ಚು ಅನಾಥಾಶ್ರಮ/ವೃದ್ಧಾಶ್ರಮಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.

ಆದರೆ ಈ ವಸ್ತುಗಳನ್ನು ಹಾಗೆಯೇ ಬಳಸಬೇಡಿ ಎಂದು ದರ್ಶನ್ ಪತ್ರ ಮುಖೇನ ಈ ಸಂಸ್ಥೆಗಳಿಗೆ ಮನವಿಯನ್ನೂ ಮಾಡಿದ್ದಾರೆ. ನನ್ನ ಹುಟ್ಟುಹಬ್ಬ ಪ್ರಯುಕ್ತ ಅಭಿಮಾನಿಗಳು ನೀಡಿದ ಧವಸ-ಧಾನ್ಯಗಳನ್ನು ನಿಮ್ಮ ಅನಾಥಾಶ್ರಮ/ವೃದ್ಧಾಶ್ರಮಕ್ಕೆ ನೀಡುತ್ತಿದ್ದೇವೆ. ದಯವಿಟ್ಟು ಇವುಗಳು ಗುಣಮಟ್ಟ ಪರೀಕ್ಷಿಯೇ ಬಳಕೆ ಮಾಡಿ ಎಂದು ದರ್ಶನ್ ಸಾಮಗ್ರಿಗಳ ಜತೆ ಮನವಿ ಪತ್ರವನ್ನೂ ನೀಡಿದ್ದಾರೆ.

Trending

To Top