gossip

ಅದೇನ್ ಕೇಳ್ತೀರೋ.. ಕೇಳಿ Answer ಮಾಡ್ತೀನಿ ಅಂತೌವ್ರೆ ಕರ್ನಾಟಕ ಕ್ರಶ್..!

ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್, ಕಾಲಿವುಡ್‌, ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಿರೋ ನಟಿ. ಅಂಥಾದ್ರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಫ್ಯಾನ್ಸ್‌ ಜೊತೆ ಮಾತಾಡ್ತಾ, ಆಯಕ್ಟೀವ್ ಆಗಿರ್ತಾರೆ. ಅದ್ರಲ್ಲೂ ಅಭಿಮಾನಿಗಳು ನಿಮ್ಮ ಮುಂದಿನ, ಸಿನಿಮಾ ಯಾವುದು? ಯಾವಾಗ ಮದುವೆ? ಯಾರನ್ನಾದ್ರೂ ಪ್ರಿತಿಸ್ತೀರಾ ಅಂತೆಲ್ಲಾ ಪ್ರಶ್ನೆಗಳನ್ನ ಕೇಳ್ತಾನೆ ಇರ್ತಾರೆ. ಇವರಿಗೆಲ್ಲಾ ಬೇಜಾರು ಮಾಡಬಾರದು ಅಂತಲೇ ಟ್ವಿಟರ್‌ನಲ್ಲಿ ರಶ್ಮಿಕಾ ರೆಡಿಯಾಗಿದಂತಿದೆ. ಶೂಟ್ ಯುರ್ ಕ್ವೆಷನ್ಸ್, ರಶ್ಮಿಕಾ ರಿಪ್ಲೈಸ್ ಅಂತಾ ಫೋಟೋ ಸಮೇತ ತಾವೇ ಈ ಸುದ್ದಿಯನ್ನ ಹಂಚಿಕೊಂಡಿದ್ದಾರೆ.

ಹಾಯ್ ಫ್ರೆಂಡ್ಸ್, ಇತ್ತೀಚೆಗಷ್ಟೇ ರಶ್ಮಿಕಾರ 3 ವರ್ಷದ ಸಿನಿಜರ್ನಿ ಅಂತಾ ಸೆಲೆಬ್ರೇಟ್ ಮಾಡಿದ್ದೀರಿ. ನಾನು ನಗರದಿಂದ ಆಚೆಯಿದ್ದ ಕಾರಣ ನಿಮಗೆಲ್ಲಾ ರಿಪ್ಲೈ ಮಾಡಲಾಗ್ಲಿಲ್ಲ.

ಇದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಆಗುತ್ತಿದೆ.#RashmikaReplies ಎಂಬ ಹ್ಯಾಶ್‌ಟ್ಯಾಗ್‌ ಬಳಸಿ, ಅದರ ಜತೆಯಲ್ಲಿ ನಿಮ್ಮ ಪ್ರಶ್ನೆಯನ್ನು ಟ್ವೀಟ್‌ ಮಾಡಬೇಕು. ಅದನ್ನು ಗಮನಿಸುವ ರಶ್ಮಿಕಾ ಟ್ವಿಟರ್‌ ಮೂಲಕವೇ ಉತ್ತರ ನೀಡಲಿದ್ದಾರೆ.

https://twitter.com/iamRashmika/status/1213381116410748928?s=19

Trending

To Top