Film News

ಅಂಬರೀಶ್ ಹಾಗೂ ಸುಮಲತಾ ಅವರ ಮದುವೆಗೆ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರ ಆಕ್ಷೇಪಣೆ ಇತ್ತು! ಆ ನಟಿ ಯಾರು ಗೊತ್ತಾ?

ಕನ್ನಡದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ , ಹಾಗೂ ನಟಿ ಸುಮಲತಾ ಅವರು ಲವ್ ಮ್ಯಾರೇಜ್ ಆಗಿ ಈಗ ಸುಖ ಜೀವನವನ್ನು ನಡೆಸಿದರು. ಆದರೆ ಅಂಬರೀಶ್ ಹಾಗೂ ನಟಿ ಸುಮಲತಾ ಅವರು ಮದುವೆ ಆಗುವ ಸಂದರ್ಭ ದಲ್ಲಿ ಕನ್ನಡದ ಮತ್ತೊಬ್ಬರು ಖ್ಯಾತ ನಟಿ ಸುಹಾಸಿನಿ ಅವರು ಈ ಮದುವೆಗೆ ಅಡ್ಡಿ ಪಡಿಸಿದ್ದರಂತೆ . ಅದು ಯಾಕೆ ಅಂತ ಹೇಳ್ತೀವಿ ಮುಂದೆ ಓದಿ..

ಪ್ರೀತಿಯಲ್ಲಿ ಇದ್ದ ನಟ ರೆಬೆಲ್ ಸ್ಟಾರ್‍ ಅಂಬರೀಶ್ ಹಾಗೂ ನಟಿ ಸುಮಲತಾ ಅವರು ಮದುವೆ ಮಾಡಿ ಕೊಳ್ಳಲು ನಿರ್ಧರಿಸಿದ್ದರು . ‘ ಮುಗ್ಗುರು ಮಿತ್ರಲು ‘ ಎಂಬ ಸಿನಿಮಾದ ಶೂಟಿಂಗ್ ಈ ಶೂಟಿಂಗ್ ನ ಸಂದರ್ಭದಲ್ಲಿ ನಟಿ ಸುಮಲತಾ ಅವರುಸ್ಟ್ರೆಚರ್ ಮೇಲೆ ಮಲಗಿದ್ದರೆ ನಟಿ ಸುಹಾಸಿನಿ ಯವರದ್ದು , ಡಾಕ್ಟರ್ ಪಾತ್ರ ಆಗಿದ್ದರಿಂದ ಸ್ಟ್ರೆಚರ್ ಅನ್ನು ತಳ್ಳುತ್ತಿದ್ದರು .

ಆಗ ನಟಿ ಸುಮಲತಾ ಅವರು ‘ ನಾನು ಮತ್ತು ಅಂಬರೀಶ್ ಅವರು ಮದುವೆ ಮಾಡಿ ಕೊಳ್ಳೊಣ ಎಂದು ಅಂದು ಕೊಂಡಿದ್ದೇವೆ ‘ ಅಂತ ಸುಹಾಸಿನಿ ಅವರ ಬಳಿ ಹೇಳಿದಾಗ .. ಇದನ್ನು ಕೇಳಿದ ಕೂಡಲೇ ಶಾಕ್ ಆದ ಸುಹಾಸಿನಿ ಯವರು ಸುಮಲತಾ ಅವರು ಮಲಗಿದ್ದ ಸ್ಟ್ರೆಚರ್ ಅನ್ನು ಬಿಟ್ಟೇ ಬಿಟ್ಟರಂತೆ ..

ನಂತರ ಸುಮಲತಾ ಅವರ ಬಳಿ ಹೋದ ಸುಹಾಸಿನಿ ಯವರು ಹೀಗಂದಿದ್ದಾರೆ ” ನಿನಗೇನೂ ಹುಚ್ಚಾ , ಏನ್ ಅಂದು ಕೊಂಡಿದ್ದೀಯಾ ನೀನು ? ಅಂಬರೀಶ್ ನ ಹ್ಯಾಂಡಲ್ ಮಾಡಕ್ಕೆ ನಿನ್ನ ಕೈಯಲ್ಲಿ ಆಗತ್ತಾ ? ನೀನು ನೋಡಿದರೆ ಮೃದು ಸ್ವಭಾವ ಮತ್ತು ಪುಸ್ತಕ ಓದಿಕೊಂಡು ಇರ್ತಿಯಾ .. ! ಅಬರೀಶ್ ಅವರದ್ದು ಬೇರೆ ವ್ಯಕ್ತಿತ್ವ . . ಇದೆಲ್ಲಾ ಆಗುವ ಕೆಲಸ ಅಲ್ಲ ತುಂಬಾ ಆಲೋಚನೆ ಮಾಡು ” . ಎಂದು ಸುಮಲತಾ ಅವರಿಗೆ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದು ಕೊಂಡಿದ್ದಾರಂತೆ ನಟಿ ಸುಹಾಸಿನಿ ಅವರು .

ಆದರೂ ನಟಿ ಸುಮಲತಾ ಅವರು ಸ್ಯಾಂಡಲ್ ವುಡ್ ನ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು 10 ವರ್ಷಗಳ ನಂತರ ಕೊನೆಗೂ ಮದುವೆ ಆದರು . ಸುಮಲತಾ ಅವರು ಈ ವಿಷಯವನ್ನು ರೆಬೆಲ್ ಸ್ಟಾರ್ ಅಂಬರೀಶ್ ಗೆ ಹೇಳಿದರಂತೆ . ಒಂದು ದಿನ ಸುಹಾಸಿನಿ ಯವರು , ಅಂಬರೀಶ್ ಅವರ ಮನೆಗೆ ಬಂದಾಗ ” ನಿನಗೆ ಏನಮ್ಮಾ ದ್ರೋಹ ಮಾಡಿದ್ದೆ ನಾನು , ನನ್ನ ಮೇಲೆ ಹಾಗೆಲ್ಲಾ ಹೇಳಿದ್ದಂತೆ ” ಅಂತ ಸುಹಾಸಿನಿ ಅವರನ್ನ ಚೆನ್ನಾಗಿ ಕ್ಲಾಸ್ ತೆಗೆದು ಕೊಂಡಿದ್ದರಂತೆ ..

Trending

To Top